ಕಿನಾರಾ ಕ್ಯಾಪಿಟಲ್ಸ್ ಅನ್ನು ಏಕೆ ಆರಿಸಬೇಕು ?
ನಿಮ್ಮ ಆದ್ಯತೆಯ ಭಾಷೆಯಲ್ಲಿ ಡಿಜಿಟಲ್- ಫಸ್ಟ್ ಪ್ರಕ್ರಿಯೆಯೊಂದಿಗೆ ₹1 ಲಕ್ಷದಿಂದ ₹30 ಲಕ್ಷದವರೆಗೆ MSME ಸಾಲವನ್ನು ಪಡಿಯಿರಿ. ನಾವು 3000ಕ್ಕೂ ಅಧಿಕ ಪಿನ್ ಕೋಡ್ ಗಳಲ್ಲಿ ಮತ್ತು 300ಕ್ಕೂ ಅಧಿಕ ವಲಯಗಳಲ್ಲಿ ಲಭ್ಯವಿದ್ದೇವೆ.
ಫಾಸ್ಟ್
24 ಗಂಟೆಗಳಲ್ಲಿ ನಿಮ್ಮ ಸಾಲವನ್ನು ಪಡಿಯಿರಿ
ಫ್ಲೆಕ್ಸಿಬಲ್
ಕನಿಷ್ಠ ಮತ್ತು ಫ್ಲೆಕ್ಸಿಬಲ್ ದಾಖಲೀಕರಣ ಪ್ರಕ್ರಿಯೆ
ಫ್ರೆಂಡ್ಲಿ
ನಮ್ಮ ಗ್ರಾಹಕ ಸೇವೆಯು ಆರಂಭದಿಂದ ಕೊನೆಯವರೆಗೂ ಸದಾ ನಿಮ್ಮ ಜೊತೆ
ನಮ್ಮ ಬ್ಯುಸಿನೆಸ್ ಲೋನ್ನೊಂದಿಗೆ ವೇಗವಾಗಿ ಬೆಳೆಯಿರಿ!
ಯಾವುದೇ ರೀತಿಯ ವ್ಯಾಪಾರ ಬೆಳೆಸುವ ಯೋಜನೆಗೆ ಹಣದ ಅಗತ್ಯವಿರುತ್ತದೆ, ಹಾಗೆಯೇ ಅದು ದೊರೆಯದಿದ್ದಾಗ ನಿಮ್ಮ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕಿನಾರಾದ ಕೋಲಾಟರಲ್-ಫ್ರೀ ಬಸ್ಸಿನೆಸ್ಸ್ ಲೋನ್ಸ್ ನಿಮಗೆ ಸಣ್ಣ ಉದ್ಯಮಗಳ ಉದ್ಯಮಿಗಳಾಗಲು (MSMEs) ಬೇಕಾದ ವೇಗದ ಹಣಕಾಸನ್ನು ಒದಗಿಸುವ ಗುರಿಯನ್ನು ಹೊಂದಿದೆ. ಕಾಗದರಹಿತ ಫಿನ್ ಟೆಕ್ ಲೋನ್ ಪ್ರಕ್ರಿಯೆಯೊಂದಿಗೆ ಕಿನಾರಾ RBI-ನೋಂದಾಯಿತ ಕಂಪನಿಯ ಸುರಕ್ಷತೆ ಮತ್ತು ಭರವಸೆಯನ್ನು ಒಂದಾಗಿಸುತ್ತದೆ.
ನಾವು ಗ್ರಾಹಕ ಸೇವೆಯನ್ನು ನಿಮ್ಮ ಮನೆ ಬಾಗಿಲಿನ ತನಕ ಒದಗಿಸುತ್ತೇವೆ ಮತ್ತು ನಮ್ಮ ಬ್ಯುಸಿನೆಸ್ ಲೋನ್ ಪ್ರಕ್ರಿಯೆಗೆ ಕನಿಷ್ಠ ದಾಖಲಾತಿ ಸಾಕಾಗುತ್ತದೆ. ನಮ್ಮ ಸಂಪೂರ್ಣ ಡಿಜಿಟಲ್ ಪ್ರಕ್ರಿಯೆಯ ಮೂಲಕ ಸಾಲದ ನಿರ್ಧಾರದಿಂದ ಸಾಲ ವಿತರಣೆಯವರೆಗೆ 24 ಗಂಟೆಗಳ ಒಳಗೆ ಆಗಬಹುದು. ಕೇವಲ ಒಂದು ನಿಮಿಷದಲ್ಲಿ ನಿಮ್ಮ ಅರ್ಹತೆಯನ್ನು ಪರಿಶೀಲಿಸಿ!
-
Tenure
12 to 60 months
-
Rates
21% to 30% p.aOn a reducing rate basis
-
1-30 lakhs
ನಿಮ್ಮ ಬೆಳವಣಿಗೆಗೆ ನಮ್ಮ ಬೆಂಬಲ
ಭಾರತ ದೇಶದಲ್ಲಿ ಮೈಕ್ರೋ, ಸ್ಮಾಲ್ ಮತ್ತು ಮೀಡಿಯಂ ಉದ್ಯಮಗಳಿಗೆ (MSMEs) ಸರಿಯಾದ ಸಾಲ ದೊರೆಯದ ಕಾರಣ ಬಹಳಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಕಿನಾರಾವು ಮೊದಲ ಬಾರಿಗೆ ಮೊಬೈಲ್ ಬಳಸಿ 300ಕ್ಕೂ ಅಧಿಕ MSME ವಲಯಗಳಿಗೆ ಯಾವುದೇ ಆಸ್ತಿ ಮೇಲಾಧಾರ ಅಥವಾ ಭದ್ರತೆಯನ್ನು ಪಡೆದುಕೊಳ್ಳದೇ ಹಣ ಸಹಾಯವನ್ನು ನೀಡುತ್ತಿದೆ. ಹೀಗಾಗಿ ಸಾಲ ಪಡಿಯಲು ನಿಮಗೆ ಆಸ್ತಿಯ ಬಗ್ಗೆ ಚಿಂತಿಸುವ ಅಗತ್ಯ ಇರುವುದಿಲ್ಲ. ಆಸ್ತಿ ಅಥವಾ ಭದ್ರತೆ ಇಲ್ಲದಿರುವ ವ್ಯಕ್ತಿ ಕೂಡ ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಈ ಬ್ಯುಸಿನೆಸ್ ಲೋನ್ ಗಳನ್ನು ಸಣ್ಣ ಉದ್ಯಮಗಳಲ್ಲಿ ಸಂಬಳ ಕೊಡುವುದರಿಂದ ಸ್ಟಾಕ್ ಅಥವಾ ಕಚ್ಚಾ ವಸ್ತುಗಳನ್ನು ಸಂಗ್ರಹಿಸುವುದಕ್ಕೆ, ನಿಮ್ಮ ಉತ್ಪನ್ನ ಶ್ರೇಣಿಯನ್ನು ವಿಸ್ತರಿಸಿಕೊಳ್ಳಲು, ಯಂತ್ರ ದುರಸ್ತಿ ಅಥವಾ ಹೊಸ ಯಂತ್ರವನ್ನು ಖರೀದಿಸುವಂತಹ ವಿವಿಧ ಉದ್ದೇಶಗಳಿಗಾಗಿ ಬಳಸಿಕೊಳ್ಳಬಹುದು. ಇದರಿಂದ ಸಣ್ಣ ವ್ಯಾಪಾರ ಉದ್ಯಮಿಗಳಿಗೆ ಬಹಳಷ್ಟು ಅನುಕೂಲವಾಗುತ್ತದೆ.
MSME ಗಳಿಗೆ ಸುಲಭ ಬ್ಯುಸಿನೆಸ್ ಲೋನ್
ಬ್ಯುಸಿನೆಸ್ ಲೋನ್ ಅನ್ನು ಪಡೆಯುವುದು ಎಷ್ಟು ಕಷ್ಟ ಎಂದು ಸಣ್ಣ ವ್ಯವಹಾರ ಉದ್ಯಮಿಗಳಿಗೆ ತಿಳಿದಿದೆ. ಮೇಲಾಧಾರವಿಲ್ಲದಿದ್ದರೆ ಬ್ಯಾಂಕುಗಳು ಸಾಲ ಕೊಡುವುದ್ದರಿಂದ ಹೆಚ್ಚಾಗಿ ದೂರ ಸರಿಯುತ್ತಾರೆ. ಹಾಗಾಗಿ, ವ್ಯಾಪಾರ ಮಾಲೀಕರು ತಪ್ಪಿದ ಅವಕಾಶಗಳಿಂದ ನಿರಾಶೆಗೊಳ್ಳುತ್ತಾರೆ, ಏಕೆಂದರೆ ಹೊಸ ಆರ್ಡರ್ ಗಳನ್ನು ಪೂರೈಸಲು ಅವರಲ್ಲಿ ಹಣವಿರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಸಮಯವು ಬಹಳ ಪ್ರಾಧಾನ್ಯ ವಾಗಿರುತ್ತದೆ . ಅದಕ್ಕಾಗಿಯೇ ಕಿನಾರಾ ಕ್ಯಾಪಿಟಲ್‌ನಿಂದ ವೇಗವಾಗಿ ಮತ್ತು ಪ್ರತಿಯೊಬ್ಬರಿಗೂ ಅನುಗುಣವಾಗಿ ದೊರೆಯುವ ಸಾಲಗಳು ಸಣ್ಣ ವ್ಯಾಪಾರದ ಉದ್ಯಮಿಗಳಿಗೆ ಬಹಳ ಮುಖ್ಯವಾಗಿರುತ್ತದೆ. ಕಿನಾರಾ ಕ್ಯಾಪಿಟಲ್‌ನಲ್ಲಿ ಕನಿಷ್ಠ ದಾಖಲಾತಿಯ ಅಗತ್ಯವಿರುತ್ತದೆ ಮತ್ತು ಅತಿವೇಗದಲ್ಲಿ ಸಾಲ ಪಡಿಯುವ ಪ್ರಕ್ರಿಯೆಯೊಂದಿಗೆ ನಿಮಗೆ ಮಾರ್ಗದರ್ಶನ ನೀಡಲು ನಮ್ಮ ಗ್ರಾಹಕ ಸೇವಾ ಅಧಿಕಾರಿಗಳು ಸದಾ ಲಭ್ಯವಿರುತ್ತಾರೆ. ಕಿನಾರಾ ಕ್ಯಾಪಿಟಲ್ ಮೂಲಕ ನಿಮಗೆ ಸುಲಭವಾಗಿ 1 ಲಕ್ಷದಿಂದ 30 ಲಕ್ಷದವರೆಗೆ ಬ್ಯುಸಿನೆಸ್ ಲೋನ್ ದೊರಕಬಹುದು .
ಕೋಲಾಟರಲ್-ಫ್ರೀ ಬಿಸಿನೆಸ್ ಲೋನ್ ಗಳು
ವಿಶೇಷವಾಗಿ ಸಣ್ಣ ವ್ಯಾಪಾರ ಉದ್ಯಮಿಗಳಿಗೆ, ಸಾಲಕ್ಕೆ ಅರ್ಜಿ ಸಲ್ಲಿಸುವುದು ಕಷ್ಟಕರವಾದ ಪ್ರಕ್ರಿಯೆ. ಸಾಧಾರಣವಾಗಿ ಅವರು ಸಾಲ ಪಡಿಯುವಲ್ಲಿ ಹೊಸಬರಾಗಿರ ಬಹುದು, ಇದರಿಂದಾಗಿ ಕಾಗದ ಪತ್ರವನ್ನು ಭರ್ತಿಮಾಡುವಾಗ ತಮ್ಮ ಮೇಲೆ ಹೆಚ್ಚಿನ ಆತ್ಮವಿಶ್ವಾಸ ಇರುವುದಿಲ್ಲ. ಇದನ್ನು ಪರಿಹರಿಸುವ ಮಾರ್ಗವೆಂದರೆ, ಸಣ್ಣ ವ್ಯಾಪಾರಿಗಳನ್ನುಅರ್ಥಮಾಡಿ ಅವರಿಗೆ ಸಹಾಯ ಮಾಡುವುದು. ಕಿನಾರ ಕ್ಯಾಪಿಟಲ್ ನ ಪ್ರತಿನಿಧಿಗಳು ಸಣ್ಣ ವ್ಯಾಪಾರಿಗಳನ್ನು ಸಂಪರ್ಕ ಮಾಡಿ, ಅವರಿಗೆ ಸಹಾಯ ಹಸ್ತವನ್ನು ನೀಡುತ್ತಾರೆ. ಕಿನಾರ ಕ್ಯಾಪಿಟಲ್ಸ್ ನ ಸಾಲ ಕೊಡುವ ಅಧಿಕಾರಿಗಳು ಬಹಳ ತಾಳ್ಮೆಇಂದ ಗ್ರಾಹಕರಿಗೆ ಮಾರ್ಗದರ್ಶನ ನೀಡುತ್ತಾರೆ ಮತ್ತು ಅಪ್ಲಿಕೇಶನ್ ಪ್ರಕ್ರಿಯೆಯ ಪ್ರತಿ ಹಂತದಲ್ಲೂ ಸಹಾಯ ಮಾಡುತ್ತಾರೆ. ಕಿನಾರದ ಕಸ್ಟಮರ್- ಫಸ್ಟ್ ಅಪ್ರೋಚ್ ನಿಂದ, ಗ್ರಾಹಕರು ಅತ್ಯುತ್ತಮ ಸೇವೆಯನ್ನು ಮುಗುಳು ನಗೆಯೊಂದಿಗೆ ನಿರೀಕ್ಷಿಸಬಹುದು ಮತ್ತು ವ್ಯವಹಾರವು ಬೆಳೆದಂತೆ, ನಿರಂತರವಾದ ಬೆಂಬಲಕ್ಕಾಗಿ ಗ್ರಾಹಕರು ಪೂರ್ಣ ಬರವಸೆಯೊಂದಿಗೆ ಕಿನಾರಾರನ್ನು ಅವಲಂಬಿಸಬಹುದು.
ನಿಮ್ಮ ಬ್ಯುಸಿನೆಸ್ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಿರಿ
ಪ್ರತಿಯೊಬ್ಬ ಸಣ್ಣ ವ್ಯಾಪಾರ ಮಾಡುವಂತಹ ಮಾಲಿಕನಿಗೆ ದೊಡ್ಡದಾದ ಕನಸಿರುತ್ತದೆ. ತಾನು ಕೂಡ ತನ್ನ ವ್ಯವಹಾರವನ್ನು ಹೆಚ್ಚಿಸಿ, ಪ್ರತಿ ಹಂತದಲ್ಲೂ ಅದನ್ನು ದೊಡ್ಡದಾಗಿ ಮತ್ತು ಉತ್ತಮಗೊಳಿಸಲು ಬಯಸುತ್ತಾನೆ. ಆದರೆ, ಅನೇಕರಿಗೆ, ಸಮಯಕ್ಕೆ ಸರಿಯಾಗಿ ಹಣ ದೊರೆಯದಿರುವುದರಿಂದ ಅವರ ಕನಸು ನನಸಾಗುವುದಿಲ್ಲ. ನಿಮ್ಮ ವ್ಯವಹಾರವನ್ನು ಬೆಳೆಸಲು ನೀವು ಬಯಸುದಾದರೆ, ಕಿನಾರಾ ಕ್ಯಾಪಿಟಲ್ ನಿಮಗೆ ಸರಿಯಾದ ಜೊತೆಗಾರ. ನಮ್ಮ ಕೊಲ್ಯಾಟರಲ್-ಫ್ರೀ ವ್ಯಾಪಾರ ಸಾಲಗಳೊಂದಿಗೆ, ನೀವು ನಿಮ್ಮ ವ್ಯಾಪಾರದ ಆವರಣವನ್ನು ವಿಸ್ತರಿಸಬಹುದು, ಯಂತ್ರೋಪಕರಣಗಳನ್ನು ಖರೀದಿಸಬಹುದು, ನಿಮ್ಮ ಸರಕುಗಳನ್ನೂ ನವೀಕರಿಸಬಹುದು, ನಿಮ್ಮ ಉತ್ಪನ್ನ ಶ್ರೇಣಿಯನ್ನು ವಿಸ್ತರಿಸಬಹುದು, ಸ್ಟಾಕ್ ಅಥವಾ ಕಚ್ಚಾ ವಸ್ತುಗಳನ್ನು ಖರೀದಿಸಬಹುದು ಮತ್ತು ಅಸಂಖ್ಯಾತ ಇತರ ಖರ್ಚುಗಳನ್ನು ಭರಿಸಬಹುದು. ಬಂಡವಾಳ ಅಷ್ಟು ಬೇಗ ಮತ್ತು ಸುಲಭವಾಗಿ ಕೈಗೆ ಎಟಕುವ ಆಯ್ಕೆಯನ್ನುಹೊಂದಿರುವುದ್ದರಿಂದ ನಿಮ್ಮ ವ್ಯವಹಾರವನ್ನು ವಿಸ್ತರಿಸಬಹುದು.
ನಮ್ಮ ಸಂತುಷ್ಟ ಗೊಂಡ ಗ್ರಾಹಕರಿಂದ ಕೇಳಿ
ನಮ್ಮ ವಿಕಾಸ್ ಚಾಂಪಿಯನ್ ರನ್ನು ಭೇಟಿ ಮಾಡಿ
ಅವರ ಧೈರ್ಯ ಮತ್ತು ಪರಿಶ್ರಮದೊಂದಿಗೆ, ಸಣ್ಣ ವ್ಯಾಪಾರ ಮಾಲೀಕರು ಸ್ಥಳೀಯ ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಭಾರತದ ಆರ್ಥಿಕತೆಯನ್ನು ಬೆಳೆಸಲು ಸಹಾಯ ಮಾಡುತ್ತಾರೆ. ಅವರು ನಮ್ಮ ಬಗ್ಗೆ ಹೇಳಬೇಕಾದದ್ದು ಇಲ್ಲಿದೆ!
ಐಶ್ವರ್ಯ ಮತ್ತು ಮೋಹನ್ ಬಾಬು
ಮುಕುಂದ್ ಆಟೊಮ್ಯಾಟ್ಸ್
“ನಾವು 2014 ರಲ್ಲಿ ನಮ್ಮ ವ್ಯವಹಾರವನ್ನು ಪ್ರಾರಂಭಿಸಿದ್ದೆವು. ಆರಂಭಿಕ ಹಂತದಲ್ಲಿ, ನಮ್ಮಲ್ಲಿ ಕೇವಲ 3 ಯಂತ್ರಗಳು ಮತ್ತು 4 ಉದ್ಯೋಗಿಗಳು ಇದ್ದರು. ಈ ಸಮಯದಲ್ಲಿ, ನಮಗೆ ದೊಡ್ಡ ಬೆಂಬಲಿಗರದ್ದದ್ದು ಕಿನಾರಾ ಕ್ಯಾಪಿಟಲ್ಸ್. ಒಂದು ಬಾರಿ ನಮಗೆ ಮೊದಲ ಸಾಲ ದೊರೆತಾಗ ನಾವು ಬೆಳೆಯಲಾರಂಭಿಸಿದೆವು. ನಮ್ಮ ಕಾರ್ಯಪಡೆ ಬೆಳೆಯಿತು, ಮತ್ತು ನಾವು ಈಗ 50 ಜನರನ್ನು ನೇಮಿಸಿಕೊಂಡಿದ್ದೇವೆ.”
ರಾಘವೇಂದ್ರ ನಾಯಕ್
ಬ್ರಾನ್ಸ ಇಂಡಿಯಾ ಟೂಲ್ಸ್
“ಕಿನಾರಾ ಕ್ಯಾಪಿಟಲ್ಸ್ ಗೆ, ವಿಶೇಷವಾಗಿ ಸಹಕಾರಿ ದಾಖಲೀಕರಣದ ವಿಷಯವಾಗಿ ಧನ್ಯವಾದವನ್ನು ಹೇಳಲು ಬಯಸುತ್ತೇನೆ. ಅವರ ಸೇವೆಯಿಂದ ನಮಗೆ ತುಂಬಾ ಸಂತೋಷವಾಗಿದೆ. ಒಂದು ವರ್ಷದಲ್ಲಿ ನಾವು ನಮ್ಮ ಮಾನವ ಬಲವನ್ನು ಸುಮಾರು 35% ಕ್ಕೆ ಹೆಚ್ಚಿಸಿದ್ದೇವೆ ಮತ್ತು ಕಳೆದ 3 ವರ್ಷಗಳಲ್ಲಿ, ನಮ್ಮ ಮಾರಾಟವು 300% ವರೆಗೆ ಹೆಚ್ಚಾಗಿದೆ. ಕಿನಾರಾರ ಬೆಂಬಲ ನಿಜವಾಗಿಯೂ ಅದ್ಭುತವಾಗಿದೆ. ಮುಂಬರುವ ವರ್ಷಗಳಲ್ಲಿ, ನಾವು ಆರ್ಥಿಕತೆಗೆ ಇನ್ನೂ ಹೆಚ್ಚಿನ ಕೊಡುಗೆ ನೀಡಬಹುದು.”
ವಿಶ್ವನಾಥನ್
ಶ್ರೀ ಸಾಯಿ ಕ್ಯಾಂಡಲ್ಸ್
“ನಮ್ಮಂತಹ ಸಣ್ಣ ಕಾರ್ಖಾನೆಗಳು ಸಾಧಾರಣವಾಗಿ ಬ್ಯಾಂಕುಗಳಿಂದ ಸಾಲ ಪಡೆಯಲು ಸಾಧ್ಯವಿಲ್ಲ. ಕಿನಾರಾ ಕ್ಯಾಪಿಟಲ್ಸ್ನೊಂದಿಗೆ, ನೀವು ಎಲ್ಲಿಯೂ ಹೋಗಬೇಕಾಗಿಲ್ಲ, ಅವರು ನಿಮ್ಮ ಬಳಿಗೆ ಬರುತ್ತಾರೆ! ನಿಮ್ಮ ದಾಖಲೆಗಳು ಸರಿಯಾಗಿದ್ದರೆ, ನೀವು ಸುಲಭವಾಗಿ ಮತ್ತು ವೇಗವಾಗಿ ಸಾಲವನ್ನು ಪಡೆಯುತ್ತೀರಿ ಕಿನಾರಾ ಕ್ಯಾಪಿಟಲ್ ಎಲ್ಲರಿಗೂ ಒಳ್ಳೆಯದು! ಇದರ ಪರಿಣಾಮವಾಗಿ ನನ್ನ ವ್ಯವಹಾರವು 40% ಕ್ಕಿಂತ ಹೆಚ್ಚಾಗಿದೆ. "