Policies
ಆರ್.ಬಿ.ಐ.ನ ʼಏಕೀಕೃತ ಓಂಬುಡ್ಸ್‌ಮನ್ ಯೋಜನೆ 2021ʼ ಎಂಬುದು ಆರ್.ಬಿ.ಐ. ನಿಯಂತ್ರಿಕತ ಸಂಸ್ಥೆಗಳು ಗ್ರಾಹಕರಿಗೆ ಒದಗಿಸುವ ವಿವಿಧ ಸೇವೆಗಳ ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಬಲಪಡಿಸುವುದಕ್ಕೆ ಒತ್ತು ನೀಡುತ್ತದೆ.
ಒಂದೇ ವೇದಿಕೆಯಡಿ ಗ್ರಾಹಕರಿಗೆ ತಮ್ಮ ಕುಂದುಕೊರತೆಗಳಿಗೆ ತ್ವರಿತವಾದ ಪರಿಹಾರವನ್ನು ಕಂಡುಕೊಳ್ಳಲು ಅನುಕೂಲವಾಗುವಂತೆ ಈಗಾಗಲೇ ಅಸ್ತಿತ್ವದಲ್ಲಿರುವ ಈ ಕೆಳಗಿನ ಓಂಬುಡ್ಸ್‌ಮನ್ ಯೋಜನೆಗಳನ್ನು ಒಂದೇ ಯೋಜನೆಯಾಗಿ ಏಕೀಕೃತಗೊಳಿಸಲಾಗುತ್ತಿದೆ:
ಆರ್.ಬಿ.ಐ.ನ ಓಂಬುಡ್ಸ್‌ಮನ್ ಕಾರ್ಯವಿಧಾನದ ಅಧಿಕಾರ ವ್ಯಾಪ್ತಿಯನ್ನು ತಟಸ್ಥವಾಗಿರುವಂತೆ ಮಾಡಲು ಈ ಯೋಜನೆಯು ʼಒಂದು ದೇಶ ಒಂದು ಓಂಬುಡ್ಸ್‌ಮನ್ʼ ಪ್ರಸ್ತಾವನೆಯನ್ನು ಅಳವಡಿಸಿಕೊಂಡಿದೆ.
ʼತೀರ್ಪುʼ ಎಂದರೆ ಓಂಬುಡ್ಸ್‌ಮನ್ ಯೋಜನೆಗೆ ಅನುಗುಣವಾಗಿ ಓಂಬುಡ್ಸ್‌ಮನ್ ನೀಡಿರುವ ತೀರ್ಪು, ಮತ್ತು ಸಂಬಂಧಪಟ್ಟ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಯ ನಿರ್ದಿಷ್ಟ ಕಾರ್ಯನಿರ್ವಹಣೆ ಮತ್ತು/ ಅಥವಾ ದೂರುದಾರರು ಅನುಭವಿಸಿದ ನಷ್ಟಕ್ಕೆ ಪರಿಹಾರವನ್ನು ಪಾವತಿಸುವ ನಿರ್ದೇಶನವನ್ನು ಒಳಗೊಂಡಿರುತ್ತದೆ.
ʼಮೇಲ್ಮನವಿಯ ಪ್ರಾಧಿಕಾರʼ ಎಂದರೆ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ರಿಸರ್ವ್ ಬ್ಯಾಂಕ್ ಇಲಾಖೆಯ ಪ್ರಭಾರಿ ಉಪ ರಾಜ್ಯಪಾಲರು.
ʼಅಧಿಕೃತ ಪ್ರತಿನಿಧಿʼ ಎಂದರೆ ಯಥೋಕ್ತವಾಗಿ ನೇಮಕಕೊಂಡಿರುವ ವಕೀಲರನ್ನು ಹೊರತುಪಡಿಸಿದ ವ್ಯಕ್ತಿ ಮತ್ತು ದೂರುದಾರನು ತನ್ನ ಪರವಾಗಿ ಕಾರ್ಯನಿರ್ವಹಿಸಲು ಮತ್ತು ತನ್ನ ದೂರನ್ನು ಓಂಬುಡ್ಸ್‌ಮನ್ ಮುಂದೆ ಈ ಯೋಜನೆಯಡಿಯ ಪ್ರಕ್ರಿಯೆಗಳಲ್ಲಿ ತನ್ನನ್ನು ಪ್ರತಿನಿಧಿಸಲು ದೂರುದಾರರಿಂದ ಅಧಿಕಾರ ಪಡೆದವನು.
ʼದೂರುʼ ಎಂದರೆ ಲಿಖಿತವಾಗಿ ಅಥವಾ ವಿದ್ಯುನ್ಮಾನ ವಿಧಾನಗಳ ಮೂಲಕ ಮಾಡಲಾದ ಯಾವುದೇ ಪ್ರಾತಿನಿಧ್ಯ ಅಥವಾ ಆಪಾದನೆಯಾಗಿದ್ದು, ಯೋಜನೆಯ ಕರಾರಿನ ಖಂಡ 8 ರಲ್ಲಿ ತಿಳಿಸಿರುವಂತೆ ಸೇವೆಯಲ್ಲಿನ ಕೊರತೆಯನ್ನು ಆಪಾದಿಸುವ ಕುಂದುಕೊರತೆಗಳನ್ನು ಒಳಗೊಂಡಿರುತ್ತದೆ.
‘ಕಂಪನಿ’ ಎಂದರೆ ಕಿನಾರ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ( ಮುಂಚೆ ವಿಸೇಜ್ ಹೋಲ್ಡಿಂಗ್ಸ್ ಅಂಡ್ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ ಎಂದು ಕರೆಯಲಾಗುತ್ತದೆ)
ʼಬ್ಯಾಂಕೇತರ ಹಣಕಾಸು ಸಂಸ್ಥೆʼ (ಎನ್.ಬಿ.ಎಫ್.ಸಿ) ಎಂದರೆ ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ, 1934 ರ ಪರಿಚ್ಛೇದ 45-I(f) ನಲ್ಲಿ ವ್ಯಾಖ್ಯಾನಿಸಲಾದ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ, 1934 ರ ಪರಿಚ್ಛೇದ 45- IA ನಲ್ಲಿ ನೋಂದಾಯಿಸಲಾದ 'ಬ್ಯಾಂಕೇತರ ಹಣಕಾಸು ಕಂಪನಿ' ಎಂದರ್ಥ.
ʼಓಂಬುಡ್ಸ್‌ಮನ್ʼ ಎಂದರೆ ಯೋಜನೆಯ ಕರಾರಿನ ಷರತ್ತು 4 ರಡಿ ನೇಮಕಗೊಂಡಿರುವ ಯಾವುದೇ ವ್ಯಕ್ತಿ.
‘ರಿಸರ್ವ್ ಬ್ಯಾಂಕ್’ ಎಂದರೆ ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ, 1934 ರ ಪರಿಚ್ಛೇದ 3 ರಿಂದ ರಚಿತವಾದ ಭಾರತೀಯ ರಿಸರ್ವ್ ಬ್ಯಾಂಕ್.
‘ಯೋಜನೆ’ ಎಂದರೆ ʼಏಕೀಕೃತ ಓಂಬುಡ್ಸ್‌ಮನ್ ಯೋಜನೆ 2021.
ನೋಡಲ್ ಅಧಿಕಾರಿಯ ಹೆಸರು - ರಿಜಿ ಕೆ
ದೂರವಾಣಿ ಸಂಖ್ಯೆ: 6364464957
ಇಮೇಲ್: [email protected]
ವಿಳಾಸ: #50, 2ನೇ ಫ್ಲೋರ್, 100 ಅಡಿ ರಸ್ತೆ, ಎಚ್ ಎಎಲ್ 2ನೇ ಸ್ಟೇಜ್ (ಡಿಫೆನ್ಸ್ ಕಾಲನಿ), ಇಂದಿರಾನಗರ, ಬೆಂಗಳೂರು, ಕರ್ನಾಟಕ 560038
ಪ್ರಧಾನ ನೋಡಲ್ ಅಧಿಕಾರಿಯ ಹೆಸರು - ಐಶ್ವರ್ಯ ರವಿ
ದೂರವಾಣಿ ಸಂಖ್ಯೆ: 6364464957
ಇಮೇಲ್: [email protected]
ವಿಳಾಸ: #50, 2ನೇ ಫ್ಲೋರ್, 100 ಅಡಿ ರಸ್ತೆ, ಎಚ್ ಎಎಲ್ 2ನೇ ಸ್ಟೇಜ್ (ಡಿಫೆನ್ಸ್ ಕಾಲನಿ), ಇಂದಿರಾನಗರ, ಬೆಂಗಳೂರು, ಕರ್ನಾಟಕ 560038
ಒಂದು ವೇಳೆ ಒದಗಿಸಲಾದ ಪ್ರತಿಕ್ರಿಯೆಯಿಂದ ಗ್ರಾಹಕರು ತೃಪ್ತರಾಗಿಲ್ಲದಿದ್ದರೆ ಮತ್ತು ಸಲ್ಲಿಕೆಯಾದ 1 ತಿಂಗಳೊಳಗೆ ಸಮಸ್ಯೆಯನ್ನು ಪರಿಹರಿಸಲಾಗಿಲ್ಲದಿದ್ದರೆ, ಗ್ರಾಹಕರು ಎನ್.ಬಿ.ಎಫ್.ಸಿ. ಓಂಬುಡ್ಸ್‌ಮನ್‌ಗೆ, ಈ ಕೆಳಗೆ ನೀಡಲಾದ ವಿವರಗಳಿಗೆ ಬರೆಯಬಹುದು:
ಕ್ರ. ಸಂ. | ಕೇಂದ್ರ | RBI ಓಂಬುಡ್ಸ್‌ಮನ್ ಹೆಸರು ಮತ್ತು ಕಚೇರಿಯ ವಿಳಾಸ |
---|---|---|
1 | ಅಹಮದಾಬಾದ್ | C/o ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, 4 ನೇ ಮಹಡಿ, "ರಿವರ್ ಫ್ರಂಟ್ ಹೌಸ್", ಎಚ್.ಕೆ. ಆರ್ಟ್ಸ್ ಕಾಲೇಜ್ ಹಿಂಭಾಗ, ಗಾಂಧಿ ಮತ್ತು ನೆಹರೂ ಬ್ರಿಡ್ಜ್ ನಡುವೆ, ಪೂಜ್ಯ ಪ್ರಮುಖ್ ಸ್ವಾಮಿ ಮಾರ್ಗ (ರಿವರ್ ಫ್ರಂಟ್ ರಸ್ತೆ- ಪಶ್ಚಿಮ), ಅಹಮದಾಬಾದ್ -380 009 ಎಸ್.ಟಿ.ಡಿ ಕೋಡ್: 079 ದೂ.ಸಂ : 26582357 |
2 | ಬೆಂಗಳೂರು | C/o ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 10/3/8, ನೃಪತುಂಗ ರಸ್ತೆ ಬೆಂಗಳೂರು -560 001 ಎಸ್.ಟಿ.ಡಿ ಕೋಡ್: 080 ದೂ.ಸಂ : 22277660/22180221 |
3 | ಚೆನ್ನೈ (I) | C/o ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಫೋರ್ಟ್ ಗ್ಲೇಸಿಸ್, ಚೆನ್ನೈ 600 001 ಎಸ್.ಟಿ.ಡಿ ಕೋಡ್: 044 ದೂ.ಸಂ.: 25395964 ಫ್ಯಾಕ್ಸ್: 25395488 |
4 | ಹೈದರಾಬಾದ್ | C/o ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 6-1-56, ಸೆಕ್ರೆಟರಿಯೇಟ್ ರಸ್ತೆ ಸೈಫ್‌ಬಾದ್, ಹೈದರಾಬಾದ್ -500 004 ಎಸ್.ಟಿ.ಡಿ ಕೋಡ್: 040 ದೂ.ಸಂ.: 23210013 |
5 | ಮುಂಬಯಿ (I) | C/o ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 4 ನೇ ಮಹಡಿ, RBI ಬೈಕುಲಾ ಕಚೇರಿ ಕಟ್ಟಡ, ಮುಂಬಯಿ ಸೆಂಟ್ರಲ್ ರೈಲು ನಿಲ್ದಾಣದ ಎದುರು, ಬೈಕುಲಾ, ಮುಂಬಯಿ -400 008 ಎಸ್.ಟಿ.ಡಿ ಕೋಡ್: 022 ದೂ.ಸಂ.: 23022028 |
6 | ಮುಂಬಯಿ (II) | C/o ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ , 1ನೇ ಮಹಡಿ, RBI ಬೈಕುಲಾ ಕಚೇರಿ ಕಟ್ಟಡ, ಮುಂಬಯಿ ಸೆಂಟ್ರಲ್ ಎದುರು, ರೈಲು ನಿಲ್ದಾಣ, ಬೈಕುಲಾ ಮುಂಬಯಿ -400 008 ಎಸ್.ಟಿ.ಡಿ ಕೋಡ್: 022 ದೂ.ಸಂ.: 23001280 |