Policies

ಓಂಬುಡ್ಸ್‌ಮನ್‌ ಯೋಜನೆ

ಪೀಠಿಕೆ

ಆರ್‌.ಬಿ.ಐ.ನ ʼಏಕೀಕೃತ ಓಂಬುಡ್ಸ್‌ಮನ್‌ ಯೋಜನೆ 2021ʼ ಎಂಬುದು ಆರ್‌.ಬಿ.ಐ. ನಿಯಂತ್ರಿಕತ ಸಂಸ್ಥೆಗಳು ಗ್ರಾಹಕರಿಗೆ ಒದಗಿಸುವ ವಿವಿಧ ಸೇವೆಗಳ ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಬಲಪಡಿಸುವುದಕ್ಕೆ ಒತ್ತು ನೀಡುತ್ತದೆ.

ಒಂದೇ ವೇದಿಕೆಯಡಿ ಗ್ರಾಹಕರಿಗೆ ತಮ್ಮ ಕುಂದುಕೊರತೆಗಳಿಗೆ ತ್ವರಿತವಾದ ಪರಿಹಾರವನ್ನು ಕಂಡುಕೊಳ್ಳಲು ಅನುಕೂಲವಾಗುವಂತೆ ಈಗಾಗಲೇ ಅಸ್ತಿತ್ವದಲ್ಲಿರುವ ಈ ಕೆಳಗಿನ ಓಂಬುಡ್ಸ್‌ಮನ್‌ ಯೋಜನೆಗಳನ್ನು ಒಂದೇ ಯೋಜನೆಯಾಗಿ ಏಕೀಕೃತಗೊಳಿಸಲಾಗುತ್ತಿದೆ:

  • ಬ್ಯಾಂಕಿಂಗ್‌ ಓಂಬುಡ್ಸ್‌ಮನ್‌ ಯೋಜನೆ, 2006
  • ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗಾಗಿ ಓಂಬುಡ್ಸ್‌ಮನ್‌ ಯೋಜನೆ 2018;
  • ಡಿಜಿಟಲ್‌ ವಹಿವಾಟುಗಳಿಗಾಗಿ ಓಂಬುಡ್ಸ್‌ಮನ್‌ ಯೋಜನೆ, 2019;

ಆರ್‌.ಬಿ.ಐ.ನ ಓಂಬುಡ್ಸ್‌ಮನ್‌ ಕಾರ್ಯವಿಧಾನದ ಅಧಿಕಾರ ವ್ಯಾಪ್ತಿಯನ್ನು ತಟಸ್ಥವಾಗಿರುವಂತೆ ಮಾಡಲು ಈ ಯೋಜನೆಯು ʼಒಂದು ದೇಶ ಒಂದು ಓಂಬುಡ್ಸ್‌ಮನ್‌ʼ ಪ್ರಸ್ತಾವನೆಯನ್ನು ಅಳವಡಿಸಿಕೊಂಡಿದೆ.

ವ್ಯಾಖ್ಯಾನಗಳು

ʼತೀರ್ಪುʼ ಎಂದರೆ ಓಂಬುಡ್ಸ್‌ಮನ್‌ ಯೋಜನೆಗೆ ಅನುಗುಣವಾಗಿ ಓಂಬುಡ್ಸ್‌ಮನ್‌ ನೀಡಿರುವ ತೀರ್ಪು, ಮತ್ತು ಸಂಬಂಧಪಟ್ಟ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಯ ನಿರ್ದಿಷ್ಟ ಕಾರ್ಯನಿರ್ವಹಣೆ ಮತ್ತು/ ಅಥವಾ ದೂರುದಾರರು ಅನುಭವಿಸಿದ ನಷ್ಟಕ್ಕೆ ಪರಿಹಾರವನ್ನು ಪಾವತಿಸುವ ನಿರ್ದೇಶನವನ್ನು ಒಳಗೊಂಡಿರುತ್ತದೆ.

ʼಮೇಲ್ಮನವಿಯ ಪ್ರಾಧಿಕಾರʼ ಎಂದರೆ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ರಿಸರ್ವ್ ಬ್ಯಾಂಕ್ ಇಲಾಖೆಯ ಪ್ರಭಾರಿ ಉಪ ರಾಜ್ಯಪಾಲರು.

ʼಅಧಿಕೃತ ಪ್ರತಿನಿಧಿʼ ಎಂದರೆ ಯಥೋಕ್ತವಾಗಿ ನೇಮಕಕೊಂಡಿರುವ ವಕೀಲರನ್ನು ಹೊರತುಪಡಿಸಿದ ವ್ಯಕ್ತಿ ಮತ್ತು ದೂರುದಾರನು ತನ್ನ ಪರವಾಗಿ ಕಾರ್ಯನಿರ್ವಹಿಸಲು ಮತ್ತು ತನ್ನ ದೂರನ್ನು ಓಂಬುಡ್ಸ್‌ಮನ್‌ ಮುಂದೆ ಈ ಯೋಜನೆಯಡಿಯ ಪ್ರಕ್ರಿಯೆಗಳಲ್ಲಿ ತನ್ನನ್ನು ಪ್ರತಿನಿಧಿಸಲು ದೂರುದಾರರಿಂದ ಅಧಿಕಾರ ಪಡೆದವನು.

ʼದೂರುʼ ಎಂದರೆ ಲಿಖಿತವಾಗಿ ಅಥವಾ ವಿದ್ಯುನ್ಮಾನ ವಿಧಾನಗಳ ಮೂಲಕ ಮಾಡಲಾದ ಯಾವುದೇ ಪ್ರಾತಿನಿಧ್ಯ ಅಥವಾ ಆಪಾದನೆಯಾಗಿದ್ದು, ಯೋಜನೆಯ ಕರಾರಿನ ಖಂಡ 8 ರಲ್ಲಿ ತಿಳಿಸಿರುವಂತೆ ಸೇವೆಯಲ್ಲಿನ ಕೊರತೆಯನ್ನು ಆಪಾದಿಸುವ ಕುಂದುಕೊರತೆಗಳನ್ನು ಒಳಗೊಂಡಿರುತ್ತದೆ.

‘ಕಂಪನಿ’ ಎಂದರೆ ಕಿನಾರ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ( ಮುಂಚೆ ವಿಸೇಜ್‌ ಹೋಲ್ಡಿಂಗ್ಸ್ ಅಂಡ್ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ ಎಂದು ಕರೆಯಲಾಗುತ್ತದೆ)

ʼಬ್ಯಾಂಕೇತರ ಹಣಕಾಸು ಸಂಸ್ಥೆʼ (ಎನ್.ಬಿ.ಎಫ್.ಸಿ) ಎಂದರೆ ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ, 1934 ರ ಪರಿಚ್ಛೇದ 45-I(f) ನಲ್ಲಿ ವ್ಯಾಖ್ಯಾನಿಸಲಾದ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ, 1934 ರ ಪರಿಚ್ಛೇದ 45- IA ನಲ್ಲಿ ನೋಂದಾಯಿಸಲಾದ 'ಬ್ಯಾಂಕೇತರ ಹಣಕಾಸು ಕಂಪನಿ' ಎಂದರ್ಥ.

ʼಓಂಬುಡ್ಸ್‌ಮನ್‌ʼ ಎಂದರೆ ಯೋಜನೆಯ ಕರಾರಿನ ಷರತ್ತು 4 ರಡಿ ನೇಮಕಗೊಂಡಿರುವ ಯಾವುದೇ ವ್ಯಕ್ತಿ.

‘ರಿಸರ್ವ್‌ ಬ್ಯಾಂಕ್’ ಎಂದರೆ ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ, 1934 ರ ಪರಿಚ್ಛೇದ 3 ರಿಂದ ರಚಿತವಾದ ಭಾರತೀಯ ರಿಸರ್ವ್‌ ಬ್ಯಾಂಕ್‌.

‘ಯೋಜನೆ’ ಎಂದರೆ ʼಏಕೀಕೃತ ಓಂಬುಡ್ಸ್‌ಮನ್‌ ಯೋಜನೆ 2021.

ಪ್ರಮುಖ ಅಂಶಗಳು

  1. ದೂರಿನ ಆಧಾರಗಳು:
    1. ಸೇವೆಯಲ್ಲಿನ ಕೊರತೆಯ ಕಾರಣದಿಂದ ಕಂಪನಿಯ ಕ್ರಿಯೆ ಅಥವಾ ಲೋಪದಿಂದ ಬಾಧಿತರಾದ ಯಾವುದೇ ಗ್ರಾಹಕರು ಯೋಜನೆಯ ಅಡಿಯಲ್ಲಿ ವೈಯಕ್ತಿಕವಾಗಿ ಅಥವಾ ಅಧಿಕೃತ ಪ್ರತಿನಿಧಿಯ ಮೂಲಕ ದೂರು ಸಲ್ಲಿಸಬಹುದಾಗಿದೆ
    2. ಸೇವೆಯಲ್ಲಿನ ಕೊರತೆ - ಗ್ರಾಹಕರಿಗೆ ಹಣಕಾಸಿನ ನಷ್ಟ ಇಲ್ಲವೇ ಹಾನಿಗೆ ಕಾರಣವಾಗಬಹುದಾದ ಅಥವಾ ಕಾರಣವಾಗದೇ ಇರಬಹುದಾದ, ಕಂಪನಿಯು ಶಾಸನಬದ್ಧವಾಗಿ ಅಥವಾ ಬೇರೆ ರೀತಿಯಲ್ಲಿ ಒದಗಿಸುವ ಅವಶ್ಯಕತೆಯಿರುವ, ಯಾವುದೇ ಹಣಕಾಸು ಸೇವೆಯಲ್ಲಿನ ಕೊರತೆ ಅಥವಾ ಅಸಮರ್ಪಕತೆ ಇದಾಗಿದೆ
  2. ದೂರಿನ ನಿರ್ವಹಣೆಯಿಲ್ಲದಿರುವುದಕ್ಕೆ ಆಧಾರಗಳು: ಸೇವೆಯಲ್ಲಿನ ಕೊರತೆಯ ಬಗ್ಗೆ ದೂರು ಇಲ್ಲದಿರುವುದು ಒಳಗೊಂಡಿರುವ ಈ ವಿಷಯಗಳಲ್ಲಿ ಯೋಜನೆಯಡಿ ಆಸ್ಪದವಿದೆ:
    1. ("ಕಂಪನಿಯ")ವಾಣಿಜ್ಯ ತೀರ್ಪು/ವಾಣಿಜ್ಯ ನಿರ್ಧಾರ;
    2. ಹೊರಗುತ್ತಿಗೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾರಾಟಗಾರ ಮತ್ತು ಕಂಪನಿಯ ನಡುವಿನ ವಿವಾದ;
    3. ಓಂಬುಡ್ಸ್‌ಮನ್‌ಗೆ ನೇರವಾಗಿ ತಿಳಿಸದೇ ಇರುವ ಕುಂದುಕೊರತೆ;
    4. ಕಂಪನಿಯ ಆಡಳಿತ ಅಥವಾ ಕಾರ್ಯನಿರ್ವಾಹಕರ ವಿರುದ್ಧದ ಸಾಮಾನ್ಯ ಕುಂದುಕೊರತೆಗಳು;
    5. ಕಾನೂನುಬದ್ಧ ಅಥವಾ ಕಾನೂನು ಜಾರಿ ಪ್ರಾಧಿಕಾರದ ಆದೇಶಗಳಿಗೆ ಅನುಗುಣವಾಗಿ ಕಂಪನಿಯು ಕೈಗೊಂಡಿರುವ ಕ್ರಮದಲ್ಲಿನ ವಿವಾದ;
    6. ರಿಸರ್ವ್ ಬ್ಯಾಂಕಿನ ನಿಯಂತ್ರಕ ವ್ಯಾಪ್ತಿಯಲ್ಲಿಲ್ಲದ ಸೇವೆ;
    7. ಕಂಪನಿಯ ನಡುವಿನ ವಿವಾದ; ಹಾಗೂ
    8. ಕಂಪನಿಯ ಉದ್ಯೋಗಿ-ಉದ್ಯೋಗದಾತನ ಸಂಬಂಧವನ್ನು ಒಳಗೊಂಡಿರುವ ವಿವಾದ
    9. ಕ್ರೆಡಿಟ್ ಇನ್ಫಾರ್ಮೇಷನ್ ಕಂಪನಿಗಳ‌ (ನಿಯಂತ್ರಣ) ಕಾಯಿದೆ, 2005 ರ ಪರಿಚ್ಛೇದ 18 ರಲ್ಲಿ ಒದಗಿಸಲಾದ ಪರಿಹಾರದ ವಿವಾದ; ಹಾಗೂ
    10. ಯೋಜನೆಯಡಿಯಲ್ಲಿ ಸೇರಿಸಲಾಗಿರದ ಕಂಪನಿಯ ಗ್ರಾಹಕರಿಗೆ ಸಂಬಂಧಿಸಿದ ವಿವಾದ
  3. ಇದರ ವಿನಾ ಯೋಜನೆಯಡಿಯಲ್ಲಿ ದೂರಿಗೆ ಆಸ್ಪದವಿಲ್ಲ:
    1. ಯೋಜನೆಯ ಅಡಿಯಲ್ಲಿ ದೂರುದಾರರು ದೂರು ನೀಡುವುದಕ್ಕೂ ಮುನ್ನ, ಸಂಬಂಧಪಟ್ಟ ಕಂಪನಿಗೆ ಲಿಖಿತ ದೂರನ್ನು ನೀಡಿದ್ದಾರೆ ಮತ್ತು -
      1. ಕಂಪನಿಯು ಆ ದೂರನ್ನು ಸಂಪೂರ್ಣವಾಗಿ ಅಥವಾ ಭಾಗಶಃ ತಿರಸ್ಕರಿಸಿದೆ ಮತ್ತು ದೂರುದಾರನು ಈ ಉತ್ತರದಿಂದ ತೃಪ್ತನಾಗಿರುವುದಿಲ್ಲ; ಅಥವಾ ಕಂಪನಿಯು ದೂರನ್ನು ಸ್ವೀಕರಿಸಿದ ನಂತರದ 30 ದಿನಗಳಲ್ಲಿ ದೂರುದಾರರು ಯಾವುದೇ ಉತ್ತರವನ್ನು ಸ್ವೀಕರಿಸಿಲ್ಲ; ಹಾಗೂ
      2.  ದೂರುದಾರರು ನೀಡಿರುವ ದೂರಿಗೆ ಕಂಪನಿಯಿಂದ ಉತ್ತರವನ್ನು ಸ್ವೀಕರಿಸಿದ ಬಳಿಕ ಒಂದು ವರ್ಷದೊಳಗೆ ಅಥವಾ ಯಾವುದೇ ಉತ್ತರವನ್ನು ಸ್ವೀಕರಿಸದೇ ಇದ್ದಲ್ಲಿ, ದೂರಿನ ದಿನಾಂಕದಿಂದ ಒಂದು ವರ್ಷ ಮತ್ತು 30 ದಿನಗಳಲ್ಲಿ ಆ ದೂರನ್ನು ಓಂಬುಡ್ಸ್‌ಮನ್‌ಗೆ ಸಲ್ಲಿಸಲಾಗುತ್ತದೆ.
    2. ದೂರು, ಈಗಾಗಲೇ ಇರುವ ದೂರಿನ ವ್ಯಾಜ್ಯ ಕಾರಣಕ್ಕೆ ಸಂಬಂಧಿಸಿಲ್ಲ-
      1. ಅದೇ ದೂರುದಾರರಿಂದ ಅಥವಾ ಒಂದು ಅಥವಾ ಹೆಚ್ಚಿನ ದೂರುದಾರರಿಂದ ಇಲ್ಲವೇ ಸಂಬಂಧಿಸಿದ ಒಂದು ಅಥವಾ ಹೆಚ್ಚಿನ ಪಕ್ಷಗಳಿಂದ ಸ್ವೀಕರಿಸಿರುವ ಇಲ್ಲವೇ ಸ್ವೀಕರಿಸದೇ ಇರುವ; ಓಂಬುಡ್ಸ್‌ಮನ್‌ ಅವರಲ್ಲಿ ಬಾಕಿ ಉಳಿದಿರುವ ಅಥವಾ ಓಂಬುಡ್ಸ್‌ಮನ್‌ನಿಂದ ಅರ್ಹತೆಗಳ ಆಧಾರದಲ್ಲಿ ಇತ್ಯರ್ಥಪಡಿಸಲಾದ ಅಥವಾ ವ್ಯವಹರಿಸಲಾದ,
      2. ಅದೇ ದೂರುದಾರರಿಂದ ಸ್ವೀಕರಿಸಿದ ಅಥವಾ ಸ್ವೀಕರಿಸದಿರುವ ಅಥವಾ ಸಂಬಂಧಿಸಿದ ಒಂದು ಅಥವಾ ಹೆಚ್ಚಿನ ದೂರುದಾರರು/ಪಕ್ಷಗಳೊಂದಿಗೆ; ಯಾವುದೇ ನ್ಯಾಯಾಲಯ, ನ್ಯಾಯಮಂಡಳಿ ಅಥವಾ ಮಧ್ಯಸ್ಥಿಕೆ ಅಥವಾ ಯಾವುದೇ ಇತರೆ ವೇದಿಕೆ ಅಥವಾ ಪ್ರಾಧಿಕಾರದ ಮುಂದೆ ಬಾಕಿ ಉಳಿದಿರುವ; ಇಲ್ಲವೇ, ಯಾವುದೇ ನ್ಯಾಯಾಲಯ, ನ್ಯಾಯಮಂಡಳಿ ಅಥವಾ ಮಧ್ಯಸ್ಥಗಾರ ಅಥವಾ ಯಾವುದೇ ಇತರೆ ವೇದಿಕೆ ಅಥವಾ ಪ್ರಾಧಿಕಾರದಿಂದ ಅರ್ಹತೆಯ ಆಧಾರದಲ್ಲಿ ಇತ್ಯರ್ಥಪಡಿಸಲಾದ ಅಥವಾ ವ್ಯವಹರಿಸಲಾದ,
    3. ದೂರು ನಿಂದನಾತ್ಮಕ ಅಥವಾ ನಿರುಪಯುಕ್ತ ಅಥವಾ ಸುಮ್ಮನೆ ಕಾಟ ಕೊಡುವುದಕ್ಕಾಗಿಯೇ ಹೂಡಿದ ಸ್ವರೂಪದ್ದಾಗಿರಬಾರದು;
    4. ಅಂತಹ ಹಕ್ಕು ಕೋರಿಕೆಗಳಿಗಾಗಿ, ಮಿತಿ ಕಾಯಿದೆ, 1963 ರ ಅಡಿಯಲ್ಲಿ ಸೂಚಿಸಲಾದ ಮಿತಿಯ ಅವಧಿಯು ಮುಕ್ತಾಯಗೊಳ್ಳುವ ಮೊದಲು ಕಂಪನಿಗೆ ದೂರು ನೀಡಿರಬೇಕು;
    5. RBI ಜಾರಿಗೆ ತಂದಿರುವ ಯೋಜನೆಯ ಷರತ್ತು 11 ರಲ್ಲಿ ನಿರ್ದಿಷ್ಟಪಡಿಸಿದಂತೆ ದೂರುದಾರರು ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತಾರೆ;
    6. ಸ್ವತಃ ವಕೀಲರೇ ನೊಂದ ವ್ಯಕ್ತಿಯಾಗಿರದ ಹೊರತು, ದೂರುದಾರರು ವೈಯಕ್ತಿಕವಾಗಿ ಅಥವಾ ವಕೀಲರನ್ನು ಹೊರತುಪಡಿಸಿ ಅಧಿಕೃತ ಪ್ರತಿನಿಧಿಯ ಮೂಲಕ ದೂರು ಸಲ್ಲಿಸಬೇಕು.

      ವಿವರಣೆ 1: ಷರತ್ತು (2)(ಎ) ಉದ್ದೇಶಗಳಿಗಾಗಿ, 'ಲಿಖಿತ ದೂರು' ಅಲ್ಲಿ ದೂರುದಾರರು ದೂರು ಸಲ್ಲಿಸಿದ ಪುರಾವೆಯನ್ನು ಸಲ್ಲಿಸಬಹುದಾದ ಇತರೆ ವಿಧಾನಗಳ ಮೂಲಕ ಮಾಡಲಾದ ದೂರುಗಳನ್ನು ಒಳಗೊಂಡಿರುತ್ತದೆ.

      ವಿವರಣೆ 2: ಷರತ್ತು (2)(b)(ii) ಉದ್ದೇಶಗಳಿಗಾಗಿ, ಅದೇ ವ್ಯಾಜ್ಯ ಕಾರಣಕ್ಕೆ ಸಂಬಂಧಿಸಿದ ದೂರು ನ್ಯಾಯಾಲಯ ಅಥವಾ ನ್ಯಾಯಮಂಡಳಿ ಅಥವಾ ಕ್ರಿಮಿನಲ್ ಅಪರಾಧದಲ್ಲಿ ಪ್ರಾರಂಭಿಸಲಾದ ಯಾವುದೇ ಪೊಲೀಸ್ ತನಿಖೆಯ ಮುಂದೆ ಬಾಕಿ ಉಳಿದಿರುವ ಅಥವಾ ನಿರ್ಧರಿಸಿದ ಕ್ರಿಮಿನಲ್ ಪ್ರಕ್ರಿಯೆಗಳನ್ನು ಒಳಗೊಂಡಿರುವುದಿಲ್ಲ.
  4. ದೂರು ಸಲ್ಲಿಸುವುದು ಹೇಗೆ?
    ಹಂತ 1: ಕಂಪನಿಗೆ ಲಿಖಿತ ದೂರು ಸಲ್ಲಿಸುವುದು.

    ಹಂತ 2: ಒಂದು ವೇಳೆ ಕಂಪನಿಯು ಉತ್ತರಿಸದಿದ್ದರೆ ಅಥವಾ ಕಂಪನಿಯ ಉತ್ತರದಿಂದ ಗ್ರಾಹಕರು ಅತೃಪ್ತರಾಗಿದ್ದರೆ

    ಹಂತ 3: ದೂರು ಸಲ್ಲಿಸಿದ ದಿನಾಂಕದಿಂದ 30 ದಿನಗಳ ಅವಧಿ ಮುಗಿದ ಬಳಿಕ

    ಹಂತ 4: RBI ಸೂಚಿಸಿದ ವಿವರಗಳೊಂದಿಗೆ https://cms.rbi.org.in ನ CMS ಪೋರ್ಟಲ್ ಮೂಲಕ RBI ಓಂಬುಡ್ಸ್‌ಮನ್‌ಗೆ ಆನ್‌ಲೈನ್‌ ಮೂಲಕ ದೂರು ಸಲ್ಲಿಸಬೇಕು (ಕಂಪನಿಯಿಂದ ಉತ್ತರ ಬಂದ ಒಂದು ವರ್ಷದ ಬಳಿಕ ಅಲ್ಲ).

    ಹಂತ 5: [email protected] ಮೂಲಕ ದೂರುಗಳನ್ನು ಸಲ್ಲಿಸಬಹುದು ಅಥವಾ ಯೋಜನೆಯ ಅನುಬಂಧದಲ್ಲಿ (RBIನಿಂದ ನೀಡಲಾದ) ಸೂಚಿಸಿದಂತೆ ಭೌತಿಕ ಸ್ವರೂಪದಲ್ಲಿ (ಪತ್ರ/ಪೋಸ್ಟ್) ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ನಲ್ಲಿ ಸ್ಥಾಪಿಸಿರುವ 'ಕೇಂದ್ರೀಕೃತ ರಶೀದಿ ಮತ್ತು ಸಂಸ್ಕರಣಾ ಕೇಂದ್ರ'ಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, 4 ನೇ ಮಹಡಿ, ಸೆಕ್ಟರ್ 17, ಚಂಡೀಗಢ - 160017 ಇಲ್ಲಿಗೆ ಕಳುಹಿಸಬಹುದು. ಒಂದು ವೇಳೆ ದೂರನ್ನು ಭೌತಿಕ ಸ್ವರೂಪದಲ್ಲಿ ಸಲ್ಲಿಸಿದ್ದರೆ, ದೂರುದಾರರು ಅಥವಾ ಅಧಿಕೃತ ಪ್ರತಿನಿಧಿಯು ಸೂಕ್ತ ಸಹಿಯನ್ನು ಹಾಕಿರಬೇಕು.

    ಈ ಟೋಲ್‌ ‍ಫ್ರೀ ಸಂಖ್ಯೆಗೆ ಕರೆ ಮಾಡಬಹುದು: 1800-103-2683
    (ಬೆಳಗ್ಗೆ 9:30 ರಿಂದ ಸಂಜೆ 6:00 ರವರೆಗೆ)
    https://kinaracapital.com/customer-grievance-redressal-policy/
  5. ದೂರಿನ ನಿರಾಕರಣೆ
    1. ಒಂದು ವೇಳೆ ದೂರು ಈ ಕೆಳಗಿನ ಸ್ಥಿತಿಯಲ್ಲಿರುವುದು ಕಂಡುಬಂದರೆ ಓಂಬುಡ್ಸ್‌ಮನ್ ಯಾವುದೇ ಹಂತದಲ್ಲಿ ಅದನ್ನು ತಿರಸ್ಕರಿಸಬಹುದು:
      1. ಯೋಜನೆಯ ಕರಾರಿನ ಕಲಂ 10 ರ ಅಡಿಯಲ್ಲಿ ನಿರ್ವಹಿಸಲಾಗದೇ ಇರುವ; ಅಥವಾ
      2. ಸಲಹೆಗಳನ್ನು ನೀಡುವ ಅಥವಾ ಮಾರ್ಗದರ್ಶನ ಅಥವಾ ವಿವರಣೆಯನ್ನು ಕೋರುವ ಸ್ವರೂಪದಲ್ಲಿದ್ದರೆ
      3. ಭಾರತೀಯ ರಿಸರ್ವ್ ಬ್ಯಾಂಕಿನ ಏಕೀಕೃತ ಓಂಬುಡ್ಸ್‌ಮನ್ ಯೋಜನೆ 2021 ರ ಕರಾರಿನ ಷರತ್ತು16(2) ಅಡಿಯಲ್ಲಿ ನಿರ್ದಿಷ್ಟಪಡಿಸಿದ ಇತರೆ ಆಧಾರಗಳಲ್ಲಿದ್ದರೆ.
  6. ಓಂಬುಡ್ಸ್‌ಮನ್‌ ಅವರು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ:
    1. ದೂರುದಾರರು ಮತ್ತು ಕಂಪನಿಯ ನಡುವಿನ ಒಪ್ಪಂದದ ಮೂಲಕ ಸಲಭಗೊಳಿಸುವಿಕೆ ಅಥವಾ ರಾಜಿ ಇಲ್ಲವೇ ಮಧ್ಯಸ್ಥಿಕೆಯ ಮೂಲಕ ದೂರಿನ ಇತ್ಯರ್ಥ ಮಾಡಲು ಓಂಬುಡ್ಸ್‌ಮನ್/ಉಪ ಓಂಬುಡ್ಸ್‌ಮನ್ ಯತ್ನಿಸುತ್ತಾರೆ.
    2. ಒಂಬುಡ್ಸ್‌ಮನ್‌ನ ಮುಂದೆ ನಡೆಯುವ ಪ್ರಕ್ರಿಯೆಗಳು ಸಾರಾಂಶವಾಗಿದ್ದು, ಯಾವುದೇ ಸಾಕ್ಷ್ಯಾಧಾರದ ನಿಯಮಕ್ಕೆ ಬದ್ಧವಾಗಿರುವುದಿಲ್ಲ.
    3. ಹೀಗಿದ್ದಾಗ ದೂರನ್ನು ಪರಿಹರಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ: -
      1. ಓಂಬುಡ್ಸ್‌ಮನ್ ಮಧ್ಯಸ್ಥಿಕೆಯಲ್ಲಿ ಕಂಪನಿಯು ಅದನ್ನು ಇತ್ಯರ್ಥಪಡಿಸಿದಾಗ ಅಥವಾ
      2. ದೂರುದಾರರು ಲಿಖಿತವಾಗಿ ಅನ್ಯಥಾ (ರೆಕಾರ್ಡ್‌ ಮಾಡಿದ) ರೀತಿಯಲ್ಲಿ ಮತ್ತು ಕುಂದುಕೊರತೆ ಪರಿಹಾರದ ವಿಧಾನ ಪ್ರಮಾಣವು ತೃಪ್ತಿಕರವಾಗಿರುವುದಾಗಿ ಒಪ್ಪಿಕೊಂಡಿದ್ದಾಗ ಅಥವಾ
      3. ದೂರುದಾರರು ಸ್ವಯಂ ಪ್ರೇರಿತವಾಗಿ ದೂರನ್ನು ಹಿಂಪಡೆದಿರುವಾಗ
    4. ಯೋಜನೆಯ ಕರಾರಿನ ಷರತ್ತು 16 ರ ಅಡಿಯಲ್ಲಿ ದೂರನ್ನು ತಿರಸ್ಕರಿಸದ ಹೊರತು, ಓಂಬುಡ್ಸ್‌ಮನ್ ತಮ್ಮ ತೀರ್ಪನ್ನು ನೀಡುತ್ತಾರೆ.
  7. ಮೇಲ್ಮನವಿ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸುವಿಕೆ
    2018 ರ ಫೆಬ್ರವರಿ 23 ರಂದು ಬ್ಯಾಂಕೇತರ ಹಣಕಾಸು ಸಂಸ್ಥೆಗಳು, 2018 ರ ಓಂಬುಡ್ಸ್‌ಮನ್‌ ಯೋಜನೆಯ ಕರಾರು ಷರತ್ತು 14 ರ ಪ್ರಕಾರ, ಭಾರತೀಯ ರಿಸರ್ವ್ ಬ್ಯಾಂಕಿನ (RBI) ಗ್ರಾಹಕ ಶಿಕ್ಷಣ ಮತ್ತು ಸಂರಕ್ಷಣಾ ಇಲಾಖೆಯ ಪ್ರಭಾರಿ ಕಾರ್ಯನಿರ್ವಾಹಕ ನಿರ್ದೇಶಕರ ಸಮಕ್ಷಮದಲ್ಲಿ, ದೂರುದಾರರು ತೀರ್ಪಿನ ಒಪ್ಪಿಗೆ ಅಥವಾ ನಿರಾಕರಣೆಯನ್ನು ತೀರ್ಪು ಸ್ವೀಕರಿಸಿದ ದಿನಾಂಕದ 30 ದಿನಗಳೊಳಗೆ ಸಲ್ಲಿಸಬೇಕು.

ಪ್ರಧಾನ ನೋಡಲ್ ಅಧಿಕಾರಿ / ನೋಡಲ್ ಅಧಿಕಾರಿಯ ಸಂಪರ್ಕ ವಿವರಗಳು ಕೆಳಕಂಡಂತಿವೆ:

ನೋಡಲ್ ಅಧಿಕಾರಿಯ ಹೆಸರು - ರಿಜಿ ಕೆ
ದೂರವಾಣಿ ಸಂಖ್ಯೆ: 6364464957
ಇಮೇಲ್: [email protected]
ವಿಳಾಸ: #50, 2ನೇ ಫ್ಲೋರ್, 100 ಅಡಿ ರಸ್ತೆ, ಎಚ್ ಎಎಲ್ 2ನೇ ಸ್ಟೇಜ್ (ಡಿಫೆನ್ಸ್ ಕಾಲನಿ), ಇಂದಿರಾನಗರ, ಬೆಂಗಳೂರು, ಕರ್ನಾಟಕ 560038

ಪ್ರಧಾನ ನೋಡಲ್ ಅಧಿಕಾರಿಯ ಹೆಸರು - ತಿರುನಾವುಕ್ಕರಸು ರಾಜೇಂದ್ರನ್
ದೂರವಾಣಿ ಸಂಖ್ಯೆ: 6364464957
ಇಮೇಲ್: [email protected]
ವಿಳಾಸ: #50, 2ನೇ ಫ್ಲೋರ್, 100 ಅಡಿ ರಸ್ತೆ, ಎಚ್ ಎಎಲ್ 2ನೇ ಸ್ಟೇಜ್ (ಡಿಫೆನ್ಸ್ ಕಾಲನಿ), ಇಂದಿರಾನಗರ, ಬೆಂಗಳೂರು, ಕರ್ನಾಟಕ 560038

ಒಂದು ವೇಳೆ ಒದಗಿಸಲಾದ ಪ್ರತಿಕ್ರಿಯೆಯಿಂದ ಗ್ರಾಹಕರು ತೃಪ್ತರಾಗಿಲ್ಲದಿದ್ದರೆ ಮತ್ತು ಸಲ್ಲಿಕೆಯಾದ 1 ತಿಂಗಳೊಳಗೆ ಸಮಸ್ಯೆಯನ್ನು ಪರಿಹರಿಸಲಾಗಿಲ್ಲದಿದ್ದರೆ, ಗ್ರಾಹಕರು ಎನ್‌.ಬಿ.ಎಫ್‌.ಸಿ. ಓಂಬುಡ್ಸ್‌ಮನ್‌ಗೆ, ಈ ಕೆಳಗೆ ನೀಡಲಾದ ವಿವರಗಳಿಗೆ ಬರೆಯಬಹುದು:

RBI ಓಂಬುಡ್ಸ್‌ಮನ್‌ ಕಾರ್ಯಾಚರಣೆಯ ವಿಳಾಸ ಮತ್ತು ಪ್ರದೇಶ

ಕ್ರ. ಸಂ.ಕೇಂದ್ರRBI ಓಂಬುಡ್ಸ್‌ಮನ್‌ ಹೆಸರು ಮತ್ತು ಕಚೇರಿಯ ವಿಳಾಸ
1ಅಹಮದಾಬಾದ್C/o ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ,
4 ನೇ ಮಹಡಿ, "ರಿವರ್‌ ಫ್ರಂಟ್‌ ಹೌಸ್‌", ಎಚ್‌.ಕೆ. ಆರ್ಟ್ಸ್‌ ಕಾಲೇಜ್‌ ಹಿಂಭಾಗ,
ಗಾಂಧಿ ಮತ್ತು ನೆಹರೂ ಬ್ರಿಡ್ಜ್‌ ನಡುವೆ,
ಪೂಜ್ಯ ಪ್ರಮುಖ್‌ ಸ್ವಾಮಿ ಮಾರ್ಗ (ರಿವರ್‌ ಫ್ರಂಟ್‌ ರಸ್ತೆ- ಪಶ್ಚಿಮ),
ಅಹಮದಾಬಾದ್ -380 009
ಎಸ್‌.ಟಿ.ಡಿ ಕೋಡ್‌: 079
ದೂ.ಸಂ : 26582357
2ಬೆಂಗಳೂರುC/o ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ
10/3/8, ನೃಪತುಂಗ ರಸ್ತೆ
ಬೆಂಗಳೂರು -560 001
ಎಸ್‌.ಟಿ.ಡಿ ಕೋಡ್‌: 080
ದೂ.ಸಂ : 22277660/22180221
6ಚೆನ್ನೈ (I)C/o ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ
ಫೋರ್ಟ್‌ ಗ್ಲೇಸಿಸ್‌, ಚೆನ್ನೈ 600 001
ಎಸ್‌.ಟಿ.ಡಿ ಕೋಡ್‌: 044
ದೂ.ಸಂ.: 25395964
ಫ್ಯಾಕ್ಸ್: 25395488
10ಹೈದರಾಬಾದ್C/o ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ
6-1-56, ಸೆಕ್ರೆಟರಿಯೇಟ್‌ ರಸ್ತೆ
ಸೈಫ್‌ಬಾದ್, ಹೈದರಾಬಾದ್ -500 004
ಎಸ್‌.ಟಿ.ಡಿ ಕೋಡ್‌: 040
ದೂ.ಸಂ.: 23210013
16ಮುಂಬಯಿ (I)C/o ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ
4‌ ನೇ ಮಹಡಿ, RBI ಬೈಕುಲಾ ಕಚೇರಿ ಕಟ್ಟಡ,
ಮುಂಬಯಿ ಸೆಂಟ್ರಲ್‌ ರೈಲು ನಿಲ್ದಾಣದ ಎದುರು,
ಬೈಕುಲಾ, ಮುಂಬಯಿ -400 008
ಎಸ್‌.ಟಿ.ಡಿ ಕೋಡ್‌: 022
ದೂ.ಸಂ.: 23022028
17ಮುಂಬಯಿ (II)C/o ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ,
1ನೇ ಮಹಡಿ, RBI ಬೈಕುಲಾ ಕಚೇರಿ ಕಟ್ಟಡ,
ಮುಂಬಯಿ ಸೆಂಟ್ರಲ್‌ ಎದುರು,
ರೈಲು ನಿಲ್ದಾಣ, ಬೈಕುಲಾ
ಮುಂಬಯಿ -400 008
ಎಸ್‌.ಟಿ.ಡಿ ಕೋಡ್‌: 022
ದೂ.ಸಂ.: 23001280